ದೇಶದ ಟಾಪ್ 10 ಕಾಪ್ ಗಳಲ್ಲಿ ನಮ್ಮ ಕನ್ನಡತಿ ರೂಪ್ ಡಿ ಮೌದ್ಗೀಲ್ | Oneindia Kannada

2017-12-29 193

Roopa D Moudgil is one among the top ten IPS officers of India. This is the list released by National Media.

ರಾಷ್ಟ್ರೀಯ ಮಾಧ್ಯಮವೊಂದು ದೇಶದ ಅತ್ಯುತ್ತಮ ಹತ್ತು ಐಪಿಎಸ್ ಅಧಿಕಾರಿಗಳ ಪಟ್ಟಿಯೊಂದನ್ನು ಮಾಡಿದ್ದು, ಆ ಅಧಿಕಾರಿಗಳ ಪಟ್ಟಿಯಲ್ಲಿ ಕರ್ನಾಟಕದ ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗಿಲ್ ಅವರ ಹೆಸರು ಕೂಡ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ದೂರು ನೀಡುವ ಮೂಲಕ ದೇಶದಾದ್ಯಂತ ಸುದ್ದಿಯಾದವರು ರೂಪಾ. ಕಾರಾಗೃಹ ಡೆಪ್ಯೂಟಿ ಇನ್ ಸ್ಪೆಕ್ಟರ್ ಜನರಲ್ ಅಗಿದ್ದ ರೂಪಾ ಅವರು ಬಯಲು ಮಾಡಿದ್ದು ಎಐಎಡಿಎಂಕೆ ಪ್ರಭಾವಿ ಶಶಿಕಲಾ ನಟರಾಜನ್ ಗೆ ಸಿಗುತ್ತಿದ್ದ ರಾಜಾತಿಥ್ಯವನ್ನು. ಅದಕ್ಕೂ ಮುನ್ನ ಕೂಡ ಪೊಲೀಸ್ ಅಧಿಕಾರಿಯಾಗಿ ರೂಪಾ ಮೌದ್ಗಿಲ್ ಅವರ ದಾಖಲೆ ಚೆನ್ನಾಗಿದೆ. 2004ರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಉಮಾಭಾರತಿ ಬಂಧನದಿಂದ ಆರಂಭವಾಗುತ್ತದೆ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆರ್ಡರ್ಲಿ ಹಾಗೂ ಬೆಂಗಾವಲು ವಾಹನವನ್ನು ತೆಗೆಸಿಹಾಕಿದ್ದು, ಸ್ಥಳೀಯ ರಾಜಕಾರಣಿಗಳ ವಿರೋಧ, ಕಡೆಗೆ ತಮ್ಮ ಹಿರಿಯ ಅಧಿಕಾರಿಯನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರಿದವರು ಅವರು. ಹದಿನೇಳು ವರ್ಷದ ವೃತ್ತಿ ಜೀವನದಲ್ಲಿ ಬಹುತೇಕ ಪ್ರತಿ ವರ್ಷವೂ ವರ್ಗಾವಣೆ ಕಂಡ ಅಧಿಕಾರಿ ಇವರು.